ಅನುವಾದ-೬

 ಮೂಲ:
ಅಖಿಲೇಷು ವಿಹಂಗೇಷು ಸತ್ಸು ಸ್ವಚ್ಛಂದಚಾರಿಷು|
ಶುಕ ಪಂಜರಬಂಧಸ್ತೇ ಮಧುರಾಣಾಂ ಗಿರಾಂ ಫಲಮ್||

ಸುಮುಖಾನುವಾದ:
ಮನಬಂದ ಕಡೆಗೆಲ್ಲ ಹಾರುವವು ಹಕ್ಕಿಗಳು
ಬಾನಿನಗಲಕ್ಕೆಲ್ಲಿ ಮೇರೆಯುಂಟು?
ಪಂಜರದ ಗಿಳಿಗಳಿವೆ ಬಂಧನದ ಬಿಗಿಯೊಳಗೆ 
ಮಧುರ ನುಡಿಗಳಿಗಿಷ್ಟೆ ಜಾಗವುಂಟು!

ಕಾಮೆಂಟ್‌ಗಳು