ಉಮಾಶಂಕರ ಕಲ್ಯಾಣ
ಮಾಸ್ಟರ್ಸೋದನು ಮುಗಿಸಿದ ಶಂಕರ;
ಪೀಹೆಚ್ಡೀಯೂ ಮುಗಿದಾಯ್ತು/
"ಇನ್ನೇನಂತೇ?", "ಮತ್ತೇನಂತೇ?"
ಎನ್ನುವ ಪ್ರಶ್ನೆಯು ಶುರುವಾಯ್ತು//
ಪೀಹೆಚ್ಡೀಯೂ ಮುಗಿದಾಯ್ತು/
"ಇನ್ನೇನಂತೇ?", "ಮತ್ತೇನಂತೇ?"
ಎನ್ನುವ ಪ್ರಶ್ನೆಯು ಶುರುವಾಯ್ತು//
ಪ್ರಾಯದ ಮಗನಿಗೆ ಮದುವೆಯ ಮಾಡುವ
ಯೋಚನೆ ಹೆಣೆದರು ಮನೆಯವರು/
ಸುಂದರ ಮಾಣಿಗೆ ಹೊಂದಿಕೆ ಬರುವಾ
ಚಂದದ ಕೂಸನು ಅರಸಿದರು//
ವಿದ್ಯದಿ, ಬುದ್ಧಿಲಿ, ವಿನಯದಿ, ರೂಪದಿ
ಶಂಕರನಂದದಿ ಯಾರಿಲ್ಲ/
ಸಾಕ್ಷಾತ್ ದೇವತೆಯಂದದಿ ಕಾಣುವ
ಹೆಣ್ಣನು ತೋರಿಸಿ ಕೊಡಿರಲ್ಲ//
ಓಹೋ! ಸಿಕ್ಕಳು, ಉಮೆಯಂತಿರುವಳು;
ಸುಭಗ ಸಮೀಕ್ಷಾ ನಾಮದಲಿ/
ನೋಡಿದ್ದಾಯ್ತು, ಇಷ್ಟವು ಆಯ್ತು,
ಒಪ್ಪಿಗೆಯಿತ್ತರು ಪ್ರೇಮದಲಿ//
ತಡವಿನ್ನೇಕೆ? ಓಲಗ ಊದಿಸಿ
ಪಾಯಸದೂಟವ ಹಾಕಾಯ್ತು/
ನವದಂಪತಿಗಳ ನೂತನ ಬದುಕಿಗೆ
ಶುಭವನು ಕೋರಿಯೆ ಬಂದಾಯ್ತು//
ಇಲ್ಲಿಗೆ ಮುಗಿಯಿತು ಮದುವೆಯ ಕಥನವು
ಹೇಳಿದ ಕೇಳಿದ ತಮಗೆಲ್ಲಾ/
ಸಿಕ್ಕಲಿ ಖುಷಿಯೂ, ಮುಖದಲಿ ನಗೆಯೂ;
ಇಷ್ಟನು ಬಿಟ್ಟರೆ ಬೇರಿಲ್ಲಾ//
೧೪/೦೧/೨೦೨೫
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ