ಚಂದ್ರಿಕೆಯ ಹುಟ್ಟುಹಬ್ಬ

 ಇಂದು ನಿನ್ನ ಹುಟ್ಟುಹಬ್ಬವಂತೆ ನನ್ನ ಚಂದ್ರಿಕೆ/
 ಸುಂದರಾಂಗಿ ತಂದೆ ನೋಡು ಪ್ರೇಮದೊಂದು ಕಾಣಿಕೆ//

ಒಲುಮೆ ಎಲೆಯ ಮೇಲೆ ನಿನಗೆ ಪ್ರೀತಿಯನ್ನ ಬಡಿಸಿಹೆ/ಕಲಸಿಕೊಳ್ಳಲದರ ಜೊತೆಗೆ ಹಾಸ್ಯದಡುಗೆ ಇರಿಸಿಹೆ//

ಎನ್ನ ಮಡಿಲಿನೊಳಗೆ ಮಲಗು, ಕಷ್ಟಗಳನು ಮರೆಯುತ/
ಸುಧೆಯ ತೆರದಿ ಮಧುರವಾದ ನೆನಪುಗಳನು ಮೆಲಕುತ//

ಸರಿದು ಹೋಗುತಿಹುದು ಕಾಲವಾಟವಾಡುವಂದದಿ/
ಹರಿಯು ಸರಿಯಿದೆನ್ನುವಂತೆ ಬಾಳ್ವ ನಾವು ಚಂದದಿ//

ಹರಡಿಕೊಳಲಿ ಬಾಳಿನಗಲ ನಮ್ಮ ಸ್ನೇಹ ಸಂತಸ/
ವಿರಸಕಲ್ಲಿ ಜಾಗವಿರದೆ ತುಂಬಿ ಬರಲಿ ಸಮರಸ//

ಹೊಸತು ವರುಷ ಬರುತಲಿಹುದು ಹರುಷವನ್ನು ತರಲದು/
ಖುಷಿಯು ಬಾಳಿಗೆಲ್ಲವಿರಲಿ ಎಂಬ ಹರಕೆಯೆನ್ನದು//

೨೪/೦೧/೨೦೨೫

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ