ಕರುಣಾಳು ಬೆಳಕು

ಬಾನ ದಾರಿಯಲಿ ಮೂಡಿಬಂದಿರುವ ಭಾನುವನ್ನು ಕಂಡು |
ಹರ್ಷಗೊಳ್ಳುತಲಿ ಹಾರಿ ಬರುತಲಿದೆ ನೋಡು ಹಕ್ಕಿಹಿಂಡು ||
ಕವಿದ ಕತ್ತಲನು ಮಾಯ ಮಾಡಿದನು ಸೂರ್ಯ ರಶ್ಮಿಯಿಂದ |
ಉದಯ ಕಾಲದಾ ದೃಶ್ಯ ಕಾವ್ಯವಿದು ನೋಡು ಎಂಥ ಚಂದ ||

ಜೀವ ಜಂತುಗಳು ಬದುಕ ನಡೆಸುವವು ರವಿಯ ಬೆಳಕ ಪಡೆದು |
ಕಾಲಚಕ್ರವದು ತಿರುಗುತಿರುವುದೇ ಅವನ ಗತಿಯ ಹಿಡಿದು ||
ಜನಗಳೆಲ್ಲರೂ ಹೊರಟು ನಿಂತಿಹರು ತಮ್ಮ ಕೆಲಸವರಸಿ |
ಬಾಲಭಾಸ್ಕರ‌ನು ಜೀವ ತುಂಬಿಹನು ಜಡವ ಬದುಗೆ ಸರಿಸಿ ||

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ