ಆರ್ಸಿಬಿಗೆ ಕೃಷ್ಣ

ಮ್ಯಾಚು ಆರಾಯ್ತು ಬಹಳ ಕಾದಾಯ್ತು ಜಯವು ಸಿಗಲೆ ಇಲ್ಲ /
ಎಬಿಡಿಯಿದ್ದರೂ ಕೊಹ್ಲಿ ಸಿಡಿದರೂ ವೆರ್ತವಾಯಿತೆಲ್ಲ//
'ಕಪ್ಪು ನಮ್ಮದೇ' ಎಂಬ ಘೋಷವದು ಸತ್ಯವಾಗಬೇಕೆ?/
ಒಮ್ಮೆ ಕಿಟ್ಟನನು ಟೀಮ್ಗೆ ಸೇರಿಸಿರಿ, ಹಾಕಿ ಜಯದ ಕೇಕೆ//

೧೩/೦೪/೨೦೧೯



('ಈ ಸಲ ಕಪ್ಪು ನಮ್ದೇ' ಅಂತ ಎಷ್ಟು ಸಲ ಹೇಳಿದ್ರೂ ಆರ್ಸಿಬಿಗೆ ಇಲ್ಲಿ ತನಕ ಸಿಕ್ಕಿರೋದು ಚಿಪ್ಪು ಮಾತ್ರ. ಆರ್ಸಿಬಿ ಪ್ರತಿ ಪಂದ್ಯ ಸೋತಾಗಲೂ ಅಭಿಮಾನಿಗಳು ದೊಡ್ಡಗೌಡ್ರ ಕುಟುಂಬದವರ ತರ ಅಳ್ತಾ ಇರ್ತಾರೆ. ಕೆಲವು ಅಭಿಮಾನಿಗಳೆಂತೂ ಉರಿ ಸಿನೆಮಾದಲ್ಲಿ ಅಜಿತ್ ಧೋವಲ್ ಮುರಿದ ಮೊಬೈಲಿಗಿಂತಲೂ ಜಾಸ್ತಿ ಟಿವಿ ಮುರಿದಿದ್ದಾರೆ ಅಂತ ಸುದ್ದಿ ಇದೆ. ಆದರೆ ವಿರಾಟ್ ಕೊಹ್ಲಿ ಮಾತ್ರ ತನ್ನನ್ನು ಎಷ್ಟು ತಮಾಷೆ ಮಾಡಿದ್ರೂ, ಯಾರೂ ಕೂಡ ಅನುಷ್ಕಾಳ ಟ್ರೋಲ್ ಮಾಡ್ತಾ ಇಲ್ವಲ್ಲಾ ಅಂತ ಸಮಾಧಾನ ಮಾಡ್ಕೊಂಡು ಖುಷಿಖುಷಿಯಾಗಿಯೇ ಆರು ಪಂದ್ಯಗಳನ್ನು ಸೋತಿದ್ದಾನೆ. ಮಲ್ಯ ಓಡಿ ಹೋದರೂ ದೋಷ ಇನ್ನೂ ಉಳಿದಿರುವುದೇ ಸೋಲಿಗೆ ಕಾರಣ ಅಂತ ಬೇರೆ ಕೆಲವರ ಅಂಬೋಣ. ದೋಷ ನಿವಾರಣೆ ಮಾಡಿಸೋಣವೆಂದರೆ ಕಣ್ಣೀರಣ್ಣ ಒಂದು ನಿಂಬೆ ಹಣ್ಣನ್ನೂ ಉಳಿಸಿಲ್ಲವಂತೆ. ನನಗೂ ನೋಡಿ ನೋಡಿ ಸಾಕಾಯ್ತು. ಹಾಗಾಗಿ ಆರ್ಸಿಬಿ ಗೆಲುವು ಕಾಣುವಂತಾಗಲು ನಾನೊಂದು ಸಲಹೆ ಕೊಡುತ್ತೇನೆ.

ಅದು ವಿರಾಟ್ ಕೊಹ್ಲಿಗೆ ತಲುಪುವ ತನಕ ಶೇರ್ ಮಾಡಿ :-)
Dedicated to all #RCB_fans.)





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ