ಅಂದು-ಇಂದು
ಅಂದು
ಶಾಲೆಗೆ ನಿಮ್ಮಯ
ಮಗುವನು ಕಳುಹಿಸಿ
ವರುಷವು ತಾನಾರಾಗುರಲಿ |
ಆಟವನಾಡುತ
ಕಲಿವನು ಪಾಠವ
ಮಗ್ಗಿಯ ಬಳ್ಳಿಯ ಚಂದದಲಿ ||
ಶಾಲೆಗೆ ನಿಮ್ಮಯ
ಮಗುವನು ಕಳುಹಿಸಿ
ವರುಷವು ತಾನಾರಾಗುರಲಿ |
ಆಟವನಾಡುತ
ಕಲಿವನು ಪಾಠವ
ಮಗ್ಗಿಯ ಬಳ್ಳಿಯ ಚಂದದಲಿ ||
ಇಂದು
ಮೂರನೆ ವರುಷವು
ತುಂಬುವ ಮೊದಲೇ
ಕೇಜಿಯ ಶಾಲೆಯು ಕರೆವುದಲಾ |
ಹುಟ್ಟುವ ಮೊದಲೇ
ಶಾಲೆಗೆ ಸೇರುವ
ಕಾಲವು ಬರುವುದು ನೋಡಿರಲಾ ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ