ಸೀಗೇಹುಡಿ

ಬಚ್ಚಲನ್ನು ಹೊಕ್ಕಿದೊಡನೆ ಕಟ್ಟೆಯೆಡೆಗೆ ನೋಡಿರಿ
ಮುಚ್ಚಿಕೊಂಡ ಡಬ್ಬಿಯೊಳಗೆ ಇರುವ ಹುಡಿಯ ಕಾಣಿರಿ.
ಸೀಗೆ ಕಾಯನಾಯ್ದು ತಂದು ಕುಟ್ಟಿ ತೆಗೆದ ಪುಡಿಯದು
ಕಾಗೆ ಬಣ್ಣವಿದ್ದರೇನು? ಕೊಳೆಯ ಕಿತ್ತು ತೆಗೆವುದು.
ಊರಳೆಲ್ಲ ಸ್ನಾನಕಿದುವೆ ಸೋಪು ಕೇಳಬೇಡಿರಿ
ಬಾರಿ ಹಳೆಯ ರೀತಿಯೆಂದು ಮೂಗು ಮುರಿಯಬೇಡಿರಿ
ಪುಡಿಯನೊಮ್ಮೆ ಮೈಗೆ ಹಚ್ಚಿ ಮತ್ತೆ ತಿಕ್ಕಿ ಗಸಗಸ
ಕಡೆಗೆ ಬಿಸಿಯ ನೀರ ಹೊಯ್ಯೆ ಮನಸಿಗೆಲ್ಲ ಸಂತಸ.
ತುರಿಕೆ, ಕಜ್ಜಿ, ಹುಣ್ಣು, ಕುರುವು ಚರ್ಮರೋಗ ಬಹುವಿಧ
ಅರಿಯಿರಯ್ಯ ಎಲ್ಲದಕ್ಕೆ ಸೀಗೆ ಹುಡಿಯೆ ಔಷಧ.
ನೂರರಷ್ಟು ಪ್ರಾಕೃತಿಕವು ಬಹಳ ಶುದ್ಧ ಸ್ವಚ್ಛವು 
ಬೇರೆ ಏನು ಬೆರಕೆ ಇಲ್ಲ,  ಕೇಳಿರಿದುವೆ ಸತ್ಯವು.
ಬಳಸಬೇಡಿ ವಿಷದ ಸೋಪು, ದೇಹಕಿದುವೆ ಉತ್ತಮ
ತೊಳೆಯೆ ಮುಖವ ಹೊಳೆವುದಾಗ ನಾಚುವಂತೆ ಪೂರ್ಣಿಮಾ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ