ನೂತನ ಬದುಕು
ಬಾರೆ ಗೆಳತಿಯೆ ನಾವು ನೂತನ
ಬದುಕನೊಂದನು ಕಟ್ಟುವ/
ನಾನು ನೀನುಗಳೆಂಬ ದ್ವೈತವ
ಮರೆವ ತೆರದಲಿ ಬದುಕುವ//
ಬದುಕನೊಂದನು ಕಟ್ಟುವ/
ನಾನು ನೀನುಗಳೆಂಬ ದ್ವೈತವ
ಮರೆವ ತೆರದಲಿ ಬದುಕುವ//
ಎಂತು ಲತಿಕೆಯು ಮರವನಪ್ಪಿಯೆ
ಉನ್ನತೋನ್ನತಗೊಂಡಿತೋ/
ಅಂತೆ ನೀನೂ ಎನ್ನನೊಪ್ಪುತ
ಜೀವಿತಾರ್ಥವ ಪಡೆದುಕೋ//
ಪಕ್ಷಿಯೆಂದಿಗು ಧರೆಗೆ ಪಂಜವ-
ನಿರಿಸಿ ನೆಲೆಯನು ಪಡೆವುದು/
ನಾನು ಅಂತೆಯೆ ಮನವ ನಿನ್ನೊಳ-
ಗಿರಿಸಿ ಸಾರ್ಥಕಗೊಳುವೆನು//
ಉದಯ ಕಾಲದ ಸೂರ್ಯರಶ್ಮಿಯು
ಜಗವ ಬೆಳಗುವ ತೆರದಲಿ/
ನನ್ನ ಮನವನು ನೀನು ತುಂಬಿಯೆ
ಬಾಳ ಜ್ಯೋತಿಯ ಬೆಳಗಿಸು//
ಸ್ವಾತಿ ಮಳೆಯದು ಕಪ್ಪೆ ಚಿಪ್ಪನು
ಸೇರೆ ಮುತ್ತದು ಜನಿಪುದು/
ಅಂತೆ ಎನ್ನನು ನೀನು ಸೇರಲು
ಬಾಳ್ಕೆಯಂದಿಗೆ ಪೂರ್ಣವು//

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ