ಉಡುಪಿಯ ಕೃಷ್ಣ

ಉಡುಪಿ ಕೃಷ್ಣನೆ ನಿನ್ನ ನೋಡಲು
ಕಡಲ ನಾಡಿಗೆ ಸಾಗಿ ಬಂದಿಹೆ
ತಡವ ಮಾಡದೆ ತೋರು ನಿನ್ನಯ ಮೊಗದ ಚಂದವನು |
ಗಡಿಗೆ ಬೆಣ್ಣೆಯು ಗಟ್ಟಿ ತುಪ್ಪವು
ಕಡಲೆ ಹಿಟ್ಟಿನ ಲಾಡು ನಿನಗಿದೆ
ಬಡವ ನಾನೈ ಕೊಡುವ ಭಕ್ಷ್ಯದಿ ತೃಪ್ತ ನೀನಾಗು ||

೦೩/೦೯/೨೦೧೮


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ