ಬಸವ
ಊರು ಕೇರಿಯ ಸುತ್ತಿ ಬಂದೆವಿಲ್ಲಿಗೆ ನಾವು
ದಾರಿಯನು ಕೊಡಿರೆಮಗೆ, ಕೊಂಚಮಾತ್ರವೆ ಸಾಕು
ತೂರಿ ಸಾಗುತಲಲ್ತೆ ಆಧುನಿಕ ಲೋಕದೊಳು ಜೀವನವ ಮಾಡಿರ್ಪೆವು |
ಸಾರಿ ಹೇಳುತಲಿಹೆವು, ಜಾಣ ಮನುಜರೆ ನಿಮಗೆ
ಹೋರಿ-ಮಾನವನೆಂಬ ಭೇದವದು ನಮಗಿಲ್ಲ
ಸೇರಿ ಜೀವನ ಮಾಳ್ಪ ಸಂಸ್ಕೃತಿಯ ಕುರುಹಾಗಿ ನಾವಿಂದು ಉಳಿದಿರ್ಪೆವು ||

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ