ಪ್ರಾಧ್ಯಾಪಕನ ಪೀಠದಲ್ಲಿದ್ದಾಗ ಕಂಡದ್ದು

ನಿದ್ದೆಗಣ್ಣನು ತೀಡಿ ತೆರೆಯುತ-
ಲೆದ್ದು ಬರುವೆವು ನಿಮ್ಮ ಪಾಠಕೆ
ಮೆದ್ದು ತಿಂಡಿಯ ಬರುವ ಹೊತ್ತಿಗೆ ಕೊಂಚ ತಡವಾಯ್ತು/
ಬಿದ್ದಿತೆಂದರೆ ಹಾಜರಾತಿಯು
ಸಿದ್ಧಗೊಳುವೆವು ಹೊರಗೆ ಹೋಗಲು
ಸದ್ದು ಮಾಡದೆ ಪಾಠ ಕೇಳುವುದೆಮಗೆ ತಿಳಿದಿಲ್ಲ//

ಕದ್ದು ನೋಡುತ ಬರೆವೆವೆಗ್ಸಾಮ್
ಹದ್ದುಗಣ್ಣದನಿಡುವಿರೇತಕೆ
ಶುದ್ಧ ಮನದಲಿ ನಕಲು ಮಾಡುವೆವನುವು ಮಾಡಿಕೊಡಿ/
ಜಿದ್ದಿನಂದದಿ ಕಳೆಯುತಂಕವ
ಬುದ್ಧಿ ಹೇಳುತಲಿರುವ ಬದಲಿಗೆ
ತಿದ್ದಿ ನೀವೇ ಮಾರ್ಕು ಸೇರಿಸಿ ಪಾಸು ಮಾಡಿಬಿಡಿ//

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಛಂದದ ಹರಟೆ

ಮಾತಾಮಹಿ

ಉಮಾಶಂಕರ ಕಲ್ಯಾಣ