ಉಮಾಶಂಕರನಿಗೆ ಶುಭ ಹಾರೈಕೆ
ಪೃಚ್ಛಕತ್ವದ ನಾಂದಿಯಿದು ನಿಮಗೆ ಶಂಕರರೆ
ಪರಶಿವನ ಬೆಂಬಲವದೊಲಿದು ಬರಲಿ/
ಅವಧಾನ ವೇದಿಕೆಗೆ ಮತ್ತೊಮ್ಮೆ ಮಗುದೊಮ್ಮೆ
ತಮಗೆ ಬರಲವಕಾಶ ಸಿಗುತಲಿರಲಿ//
ಪರಶಿವನ ಬೆಂಬಲವದೊಲಿದು ಬರಲಿ/
ಅವಧಾನ ವೇದಿಕೆಗೆ ಮತ್ತೊಮ್ಮೆ ಮಗುದೊಮ್ಮೆ
ತಮಗೆ ಬರಲವಕಾಶ ಸಿಗುತಲಿರಲಿ//
ಅಂಕೆಕಟ್ಟನು ಮುರಿಯಲಾಶು ಕವಿತೆಯ ಹೇಳಿ
ಬಳಿಕ ತಡೆ, ತೊಡಕುಗಳು, ಚಿತ್ರಬಂಧ/
ಮುಷ್ಟಿಯನು ಬಿಗಿಗೊಳಿಸಿ ಸಾಲಿಗಿಡುತಕ್ಷರವ
ಪ್ರತಿಮಾಲೆ ನಿಮ್ಮದಿರಲೆಷ್ಟು ಚಂದ//
ಅಕ್ಷರವನಡಗಿಸಿಡಿ, ಪದಗಳನು ಕೊಟ್ಟುಬಿಡಿ
ಜೊತೆಗಷ್ಟು ತುಂಟತನವನಲ್ಲಿ ಬೆರೆಸಿ/
ಹತ್ತಾರು ವಿಧಗಳಲಿ ಪೃಚ್ಛಕತ್ವವ ಮೆರೆಸಿ
ತದನಂತರವಧಾನಿಯಾಗಿ ಜಯಿಸಿ//
೦೮/೦೨/೨೦೨೪
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ