ಬರಗಾಲ ಮತ್ತು ತದನಂತರ
ಹಲವು ದಿನಗಳ ಕಾಲ ಕಂಬನಿಯನಿರಿಸಿತೊಲೆ,
ಒಳಕಲ್ಲು ಒಳಗೊಳಗೆ ಅಳ್ಳುತಿತ್ತು/
ಹಲವು ದಿನಗಳ ಕಾಲ ಒಕ್ಕಣ್ಣ ಕರಿನಾಯಿ
ಅವರ ಬಳಿಯಲ್ಲಿಯೇ ಮಲಗುತಿತ್ತು//
ಒಳಕಲ್ಲು ಒಳಗೊಳಗೆ ಅಳ್ಳುತಿತ್ತು/
ಹಲವು ದಿನಗಳ ಕಾಲ ಒಕ್ಕಣ್ಣ ಕರಿನಾಯಿ
ಅವರ ಬಳಿಯಲ್ಲಿಯೇ ಮಲಗುತಿತ್ತು//
ಹಲವು ದಿನಗಳ ಕಾಲ ಗೋಡೆಗಳ ಮೇಲೆಲ್ಲ
ಹಲ್ಲಿಗಳ ಹರಿದಾಟ ಬಹಳವಾಯ್ತು/
ಹಲವು ದಿನಗಳ ಕಾಲ ಇಲಿಗಳದ್ದೂ ಕೂಡ
ದಯನೀಯ ಜೀವನವದಾಗಿ ಹೋಯ್ತು//
ಹಲವು ದಿನಗಳ ಮೇಲೆ ಧವಸ ಧಾನ್ಯಗಳೆಲ್ಲ
ಮನೆಯನ್ನು ಸೇರಿದವು ಅಂತು ಇಂತು/
ಹಲವು ದಿನಗಳ ಮೇಲೆ ಹಿಂಬದಿಯ ಅಂಗಳದಿ
ಕರಿಹೊಗೆಯು ಸಡಗರದಿ ಹೊಮ್ಮಿ ಬಂತು//
ಹಲವು ದಿನಗಳ ಮೇಲೆ ಮನೆಜನರ ಕಣ್ಣುಗಳು
ಸಂತಸವ ಬೀರುತ್ತ ಹೊಳೆದವಂದು/
ಹಲವು ದಿನಗಳಮೇಲೆ ಕಾಗೆಗಳು ರೆಕ್ಕೆಗಳ
ಬಿಚ್ಚಿದವು ಅನ್ನವನು ಹೆಕ್ಕಿ ತಿಂದು//
(ಹಿಂದಿ ಪದ್ಯದ ಕನ್ನಡಾನುವಾದ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ