ನೀರುಗಾರಿನ ಬಿಂದುಮಾಧವ
ದಟ್ಟ ಕಾನನ ಪುಷ್ಪ ಫಲಗಳು
ಕಟ್ಟೆ ಕೆರೆಗಳು ಹರಿವ ತೊರೆಗಳು
ಬೆಟ್ಟದಿಂದಲಿ ಸುತ್ತುವರಿದಿಹ ರಮ್ಯ ಪರಿಸರವು|
ತೊಟ್ಟು ಬನಗಳ ಹಸಿರ ವಸ್ತ್ರವ
ಪುಟ್ಟ ಹಳ್ಳಿಯು ಸೊಗಸು ಸೂಸಿರೆ
ಸುಟ್ಟ ಕಾಮನು ಜನಿಸಿ ತಂಗಿದನಿಲ್ಲಿಯೆನಿಸುವುದು||
ಕಟ್ಟೆ ಕೆರೆಗಳು ಹರಿವ ತೊರೆಗಳು
ಬೆಟ್ಟದಿಂದಲಿ ಸುತ್ತುವರಿದಿಹ ರಮ್ಯ ಪರಿಸರವು|
ತೊಟ್ಟು ಬನಗಳ ಹಸಿರ ವಸ್ತ್ರವ
ಪುಟ್ಟ ಹಳ್ಳಿಯು ಸೊಗಸು ಸೂಸಿರೆ
ಸುಟ್ಟ ಕಾಮನು ಜನಿಸಿ ತಂಗಿದನಿಲ್ಲಿಯೆನಿಸುವುದು||
ಇಂದು ಶೇಖರ ತನ್ನ ದೇಶದಿ
ಬಂಧುಬಾಂಧವರನ್ನು ಸೇರಿಸಿ
ಯೊಂದು ಶುಭದಿನ ಭುವಿಯ ಸುತ್ತುತಲಲ್ಲಿ ಬಂದಿರಲು|
ಚೆಂದದಿಂದಲಿ ಬೆಳೆದ ಹುಲ್ಲನು
ನಂದಿರಾಯನು ಬಯಸಿ ಪೇಳಲು
ಬಿಂದುಮಾಧವನೆನಿಸಿಯಲ್ಲಿಯೆ ಶಿವನು ನೆಲೆಸಿದನು ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ