ಭೀಮೇಶ್ವರ ಮಾಹಾತ್ಮೆ
ವನವಾಸದಿ ಪಾಂಡವರೆಲ್ಲರಿರಲ್
ಶಿವರಾತ್ರಿಯ ರಾತ್ರಿಯು ಬಂದಿರೆ ತಾಂ
ಶಿವಪೂಜೆಯು ತಪ್ಪುವುದೆಂದೆನುತಂ
ಬಹು ಚಿಂತಿತಳಾಗಿಯೆ ಕುಂತಿಯಿರಲ್
ಶಿವರಾತ್ರಿಯ ರಾತ್ರಿಯು ಬಂದಿರೆ ತಾಂ
ಶಿವಪೂಜೆಯು ತಪ್ಪುವುದೆಂದೆನುತಂ
ಬಹು ಚಿಂತಿತಳಾಗಿಯೆ ಕುಂತಿಯಿರಲ್
ಸುತರೈವರು ನಾವಿರೆ ಚಿಂತೆಯದೇ-
ಕೆನುತಂ ಬಲಭೀಮನು ಕಾಶಿಗೆ ಪೋ-
ಗಿಯೆ ಲಿಂಗವ ತಂದನು; ಪಾರ್ಥನು ಪ-
ರ್ವತಕಂ ಪೊಡೆದಂ ಶರರಾಶಿಗಳನ್
ಜಲವೆದ್ದುದದೊಮ್ಮೆಗೆ ಬಿದ್ದುದು ತಾಂ
ಹೊಳೆಯಾಗಿಯೆ ಸಾಗಿತದಾ ಜಲವಂ
ಶಿವಲಿಂಗಕೆ ಹೊಯ್ದರು ಭಕ್ತಿಯೊಳೀ-
ಶನ ಪೂಜಿಸಿ ಸಂತಸ ಹೊಂದಿದರೈ
ಮಲೆನಾಡಿನ ಸುಂದರ ಕಾನನದೊಳ್
ಹೊಳೆಯಿಂತದು ತಾಂ ಶರದಿಂ ಜನಿಸಲ್
ತಲೆಕಾಯುತ ಭಕ್ತ ಜನಂಗಳ ತಾಂ
ನೆಲೆಯಾಗಿಹನೀ ವರ ಭೀಮಶಿವಂ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ